Friday, 17 July 2026
Facebook Instagram YouTube Contact 📰 E-Paper
India's Voice for Rural News & Entrepreneurship
Rooted in Bharat. Driven by Purpose.
Friday, 17 July 2026 | Vol. 7, No. 198 | Bengaluru Edition
Breaking Welcome to Rural CEO - India's voice for rural news & entrepreneurshipLatest agriculture updates from across BharatRural economy insights for kirana store owners & farmersEntrepreneurship stories from India's heartland ◆ KARNATAKA MANDI RATES ◆ Wheat ₹2,275/qtlOnion ₹1,800/qtlTomato ₹2,200/qtlPotato ₹1,400/qtlTur Dal ₹13,200/qtlChana ₹6,800/qtlMaize ₹1,890/qtlGroundnut ₹5,600/qtlCoconut ₹2,800/qtlPaddy ₹2,183/qtlRagi ₹3,846/qtlSoyabean ₹4,200/qtlWelcome to Rural CEO - India's voice for rural news & entrepreneurshipLatest agriculture updates from across BharatRural economy insights for kirana store owners & farmersEntrepreneurship stories from India's heartland ◆ KARNATAKA MANDI RATES ◆ Wheat ₹2,275/qtlOnion ₹1,800/qtlTomato ₹2,200/qtlPotato ₹1,400/qtlTur Dal ₹13,200/qtlChana ₹6,800/qtlMaize ₹1,890/qtlGroundnut ₹5,600/qtlCoconut ₹2,800/qtlPaddy ₹2,183/qtlRagi ₹3,846/qtlSoyabean ₹4,200/qtl
Impact Stories

ಸ್ಥಳೀಯ ಕಿರಾಣಿ ವ್ಯಾಪಾರಿಗಳ ಬದುಕಿಗೆ ‘ವಿಲ್ ಕಾರ್ಟ್’ ಆಸರೆ: 40 ವರ್ಷಗಳ ಕಾಯಕಕ್ಕೆ ಸಿಕ್ಕಿತು ಹೊಸ ಆಯಾಮ

ಕನಕಪುರ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಳ್ಳಿ ಮತ್ತು ಪಟ್ಟಣಗಳ ಸಣ್ಣಪುಟ್ಟ ವ್ಯಾಪಾರಿಗಳ ಶ್ರಮವನ್ನು ಕಡಿಮೆ ಮಾಡಿ, ಅವರ ವ್ಯವಹಾರಕ್ಕೆ ವೇಗ ನೀಡುವಲ್ಲಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ಮುಂಚೂಣಿಯಲ್ಲಿವೆ. ಇದಕ್ಕೆ ತಾಜಾ ಉದಾಹರಣೆ, ಕನಕಪುರದ ಹಿರಿಯ ವ್ಯಾಪಾರಿ ಬೋಳ್ಳಿ ಮರಿಗೌಡರ ಯಶೋಗಾಥೆ.

ನಾಲ್ಕು ದಶಕಗಳ ಸವಾಲಿನ ಪಯಣ

ಕಳೆದ 40 ವರ್ಷಗಳಿಂದ ಕಿರಾಣಿ ವ್ಯಾಪಾರವನ್ನೇ ನಂಬಿ ಬದುಕುತ್ತಿರುವ ಮರಿಗೌಡರು ಸವೆಸಿದ ಹಾದಿ ಅಷ್ಟು ಸುಲಭದ್ದಲ್ಲ. ದಿನಸಿ ಸಾಮಗ್ರಿಗಳನ್ನು ತರಲು ಅವರು ಮಳೆ-ಬಿಸಿಲನ್ನ ಎಣಿಸದೆ ಹಲಗೂರು, ಸಾತನೂರು ಅಥವಾ ಕನಕಪುರದ ಮಾರುಕಟ್ಟೆಗಳಿಗೆ ಅಲೆಯಬೇಕಿತ್ತು.

“ನಾವು ಸುಮಾರು 40 ವರ್ಷದಿಂದ ಈ ವ್ಯಾಪಾರ ಮಾಡ್ಕೊಂಡು ಹೋಗ್ತಾ ಇದೀವಿ. ಸಾಮಗ್ರಿ ತರಲು ದೂರದ ಊರುಗಳಿಗೆ ಹೋಗಬೇಕಿತ್ತು. ಹವಾಮಾನ ವೈಪರೀತ್ಯವಿದ್ದರೂ ಅನಿವಾರ್ಯವಾಗಿ ಹೋಗಿ ಸರಕುಗಳನ್ನು ಹೊತ್ತು ತರುತ್ತಿದ್ದೆವು,” ಎಂದು ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಆರ್ಥಿಕ ಹೊರೆಯಾಗಿದ್ದ ಸಾರಿಗೆ ವೆಚ್ಚ

ಹಳೆಯ ಪದ್ಧತಿಯಲ್ಲಿ ಸರಕುಗಳನ್ನು ತರುವುದು ಕೇವಲ ದೈಹಿಕ ಶ್ರಮ ಮಾತ್ರವಲ್ಲದೆ, ಆರ್ಥಿಕವಾಗಿಯೂ ಹೊರೆಯಾಗಿತ್ತು. ಮಾರುಕಟ್ಟೆಯಿಂದ ಅಂಗಡಿಗೆ ಸಾಮಗ್ರಿ ತರಲು ಕನಿಷ್ಠ 700 ರೂಪಾಯಿಗಳವರೆಗೂ ಬಾಡಿಗೆ ನೀಡಬೇಕಾದ ಪರಿಸ್ಥಿತಿ ಇತ್ತು. ಸಣ್ಣ ವ್ಯಾಪಾರಿಗಳಿಗೆ ಈ ಬಾಡಿಗೆ ವೆಚ್ಚವು ಲಾಭದ ಬಹುಪಾಲನ್ನು ನುಂಗಿ ಹಾಕುತ್ತಿತ್ತು.

ಬದಲಾವಣೆ ತಂದ ‘ವಿಲ್ ಕಾರ್ಟ್’ (VilCart)

ಕಳೆದ 3-4 ವರ್ಷಗಳಿಂದ ಕನಕಪುರ ಟೌನ್‌ನಲ್ಲಿ ಕಾರ್ಯಾಚರಣೆ ಆರಂಭಿಸಿರುವ ‘ವಿಲ್ ಕಾರ್ಟ್’ ಸಂಸ್ಥೆಯು ಮರಿಗೌಡರಂತಹ ಸಾವಿರಾರು ವ್ಯಾಪಾರಿಗಳ ಪಾಲಿಗೆ ವರದಾನವಾಗಿದೆ.

  • ಸರಿಯಾದ ಸರಬರಾಜು: ಆರ್ಡರ್ ಮಾಡಿದ ಸರಕುಗಳು ಯಾವುದೇ ಲೋಪವಿಲ್ಲದೆ ನಿಖರವಾಗಿ ಅಂಗಡಿಯ ಬಾಗಿಲಿಗೆ ತಲುಪುತ್ತಿವೆ.
  • ಸ್ಪರ್ಧಾತ್ಮಕ ದರ: ಮಾರುಕಟ್ಟೆಯ ದರಕ್ಕೆ ಅನುಗುಣವಾಗಿಯೇ ಬೆಲೆ ಇರುವುದರಿಂದ ವ್ಯಾಪಾರಿಗಳಿಗೆ ನಷ್ಟದ ಭೀತಿ ಇಲ್ಲದಂತಾಗಿದೆ.
  • ಸ್ಪಾಟ್ ಡೆಲಿವರಿ: ಅಲೆದಾಟ ತಪ್ಪಿಸಿ, ನೇರವಾಗಿ ಅಂಗಡಿಗೇ ಸಾಮಗ್ರಿ ತಲುಪಿಸುವ ವ್ಯವಸ್ಥೆಯಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತಿದೆ (Free Delivery) 

ಕೃತಜ್ಞತೆ ಸಲ್ಲಿಸಿದ ಮರಿಗೌಡರು

“ನಾವೇ ಗಾಡಿ ಮಾಡಿಕೊಂಡು ಹೋಗಿ ತರುವ ಬದಲು, ಇವರೇ ನಮಗೆ ಸ್ಪಾಟ್ ಡೆಲಿವರಿ ಕೊಡುತ್ತಿದ್ದಾರೆ. ಇದರಿಂದ ನಮಗೆ ತುಂಬಾ ಸಹಾಯವಾಗಿದೆ. ವಿಲ್ ಕಾರ್ಟ್ ಸಂಸ್ಥೆಗೆ ನಾವು ತುಂಬಾ ಧನ್ಯವಾದಗಳನ್ನು ಹೇಳುತ್ತೇವೆ,” ಎನ್ನುತ್ತಾರೆ ಮರಿಗೌಡರು.

ಒಟ್ಟಾರೆಯಾಗಿ, ಗ್ರಾಮೀಣ ಮತ್ತು ಅರೆ-ಪಟ್ಟಣ ಪ್ರದೇಶದ ಕಿರು ವ್ಯಾಪಾರಿಗಳಿಗೆ ಆಧುನಿಕ ಸಪ್ಲೈ ಚೈನ್ ವ್ಯವಸ್ಥೆ ಹೇಗೆ ಬೆನ್ನೆಲುಬಾಗಿ ನಿಲ್ಲಬಲ್ಲದು ಎಂಬುದಕ್ಕೆ ಮರಿಗೌಡರ ಈ ಬದಲಾವಣೆಯ ಪಯಣವೇ ಸಾಕ್ಷಿ.

ಮಾರುಕಟ್ಟೆ ಮುಖ್ಯಾಂಶಗಳು: ಬಂಗಾರ, ಬೆಳ್ಳಿ ಹಾಗೂ ದಿನಬಳಕೆ ವಸ್ತುಗಳ ದರ ಏರಿಕೆ

ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದ ಪರ್ವ ಮುಂದುವರೆದಿದೆ. ಹೂಡಿಕೆದಾರರ ನೆಚ್ಚಿನ ತಾಣವಾದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಅಡುಗೆ ಎಣ್ಣೆ ಹಾಗೂ ಧಾನ್ಯಗಳ ಬೆಲೆಯೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ, ಮಾರುಕಟ್ಟೆ ವರದಿಯ ಸಂಪೂರ್ಣ ವಿವರ ಇಲ್ಲಿದೆ.

೧. ಆಭರಣ ಮಾರುಕಟ್ಟೆ (Jewellery Rates) as on 24th April 2026 

ಬೆಂಗಳೂರು ಮಾರುಕಟ್ಟೆಯಲ್ಲಿ ಹಳದಿ ಲೋಹದ ಅಬ್ಬರ ಜೋರಾಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಲಕ್ಷದ ಗಡಿ ದಾಟಿ ಮುನ್ನುಗ್ಗುತ್ತಿರುವುದು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದೆ.

  • ಶುದ್ಧ ಚಿನ್ನ (24 ಕ್ಯಾರೆಟ್ – 10 ಗ್ರಾಂ): ₹ 1,50,930
  • ಆಭರಣ ಚಿನ್ನ (22 ಕ್ಯಾರೆಟ್ – 10 ಗ್ರಾಂ): ₹ 1,38,350
  • ಬೆಳ್ಳಿ (1 ಕೆ.ಜಿ): ₹ 2,50,000
  • ಪ್ಲಾಟಿನಂ (10 ಗ್ರಾಂ): ₹ 59,660
  • ವಜ್ರ (1 ಕ್ಯಾರೆಟ್): ₹ 65,000

೨. ಅಡುಗೆ ಎಣ್ಣೆ ಮತ್ತು ದಿನಸಿ ದರಗಳು (Oil & Grocery)

ಅಡುಗೆ ಎಣ್ಣೆ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ಸ್ಥಿರವಾಗಿದ್ದರೂ, ಕಡಲೆಕಾಯಿ ಎಣ್ಣೆ ಸ್ವಲ್ಪ ಏರಿಕೆ ಕಂಡಿದೆ.

  • ಸೂರ್ಯಕಾಂತಿ ಎಣ್ಣೆ (10 ಲೀಟರ್): ₹ 1,200 – ₹ 1,260 (ಬ್ರ್ಯಾಂಡ್ ಆಧಾರಿತ)
  • ಕಡಲೆಕಾಯಿ ಎಣ್ಣೆ (10 ಲೀಟರ್): ₹ 1,428 – ₹ 1,600
  • ಸಕ್ಕರೆ (50 ಕೆ.ಜಿ): ₹ 2,040 – ₹ 2,090
  • ಬೆಲ್ಲ (ಕ್ವಿಂಟಾಲ್): ₹ 5,000 – ₹ 5,900 (ಉತ್ತಮ ತಳಿ)

೩. ಧಾನ್ಯ ಹಾಗೂ ಬೇಳೆಕಾಳುಗಳ ವಿವರ (Grains & Pulses)

ತೊಗರಿಬೇಳೆ ಹಾಗೂ ಉದ್ದಿನಬೇಳೆ ದರಗಳು ಮಧ್ಯಮ ವರ್ಗದವರಿಗೆ ತುಸು ಹೊರೆಯಾಗುತ್ತಿವೆ.

  • ತೊಗರಿಬೇಳೆ (50 ಕೆ.ಜಿ): ₹ 6,300 – ₹ 6,950
  • ಉದ್ದಿನಬೇಳೆ (50 ಕೆ.ಜಿ): ₹ 5,550 – ₹ 6,150
  • ಅಕ್ಕಿ (ಕ್ವಿಂಟಾಲ್): ₹ 4,000 – ₹ 5,800 (ಸೋನಾ ಮಸೂರಿ ಮತ್ತು ಇತರೆ)
  • ರಾಗಿ (ಕ್ವಿಂಟಾಲ್): ₹ 4,600 – ₹ 5,200
  • ಗೋಧಿ (50 ಕೆ.ಜಿ): ₹ 1,900 – ₹ 2,180

೪. ವಾಣಿಜ್ಯ ಬೆಳೆಗಳು ಮತ್ತು ಕೃಷಿ ಮಾರುಕಟ್ಟೆ (Commercial Crops)

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ ಅಡಿಕೆ ಮತ್ತು ಕಾಫಿ ದರಗಳು ಈ ಕೆಳಗಿನಂತಿವೆ:

  • ಅಡಿಕೆ (ಕ್ವಿಂಟಾಲ್): ರಾಶಿ ಅಡಿಕೆ ₹ 53,699 ವರೆಗೆ ಹಾಗೂ ಸರಕು ಅಡಿಕೆ ಗರಿಷ್ಠ ₹ 81,740 ತಲುಪಿದೆ.
  • ಕಾಫಿ (ಕ್ವಿಂಟಾಲ್): ಅರೇಬಿಕಾ ಪಾರ್ಚ್‌ಮೆಂಟ್ ₹ 23,100 ಹಾಗೂ ರೋಬಸ್ಟಾ ಚೆರ್ರಿ ₹ 12,100 ರಷ್ಟಿದೆ.
  • ಏಲಕ್ಕಿ (ಕೆ.ಜಿ): ₹ 1,500 – ₹ 1,900
  • ಮೊಟ್ಟೆ (100 ಮೊಟ್ಟೆಗಳಿಗೆ): ₹ 455

ವಿಶೇಷ ಸೂಚನೆ: ಮಾರುಕಟ್ಟೆಯ ಈ ದರಗಳು ಆಯಾ ದಿನದ ಆವಕ ಮತ್ತು ಬೇಡಿಕೆಗೆ ಅನುಗುಣವಾಗಿ ಬದಲಾಗುತ್ತಿರುತ್ತವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ದರಗಳು ಸ್ವಲ್ಪ ವ್ಯತ್ಯಾಸವಿರಬಹುದು.

Rural CEO

Rural CEO

About Author

Leave a Reply

Your email address will not be published. Required fields are marked *

Get Latest Updates and big deals

    Our expertise, as well as our passion for web design, sets us apart from other agencies.

    RuralCEO @2026. All Rights Reserved.